ಮಾತೃನಂದಿನಿ 141
ಮುಖ್ಯವಾಗಿದೆ. ಇಷ್ಟು ಸಾಕು. ಭಗವತ್ವ ಹಾಯವೇ ನಿನ್ನನ್ನು ತ್ರಿಕಾಲದಲ್ಲಿಯೂ ಬೆಂಬಿಡದೆ ಸಂರಕ್ಷಿಸುತ್ತಿರಬೇಕು. ಇತಿ,
ನಿನ್ನ ಹಿತಾಕಾಂಕ್ಶಿ, ” ಸ್ವರ್ಣಯು ಪತ್ರವಾಚನವನ್ನು ಮುಗಿಸಿದ ಬಳಿಕ, ಲಜ್ಞೆಯಿಂದ ನಂದಿನಿಯ ಮರೆಯಲ್ಲಿ ಕುಳಿತಳು. ನಂದಿನಿಯು ಒಮ್ಮೆ ಅಚಲನನ್ನು ನೋಡಿ, ಮತ್ತೆ ಮೊದಲಿನಂತೆ ಕುಳಿತಳು.
ಚಿತ್ರಕಲೆ:-ಇದೇನು ತಂತ್ರವಪ್ಪ-ಅಚಲಚಂದ್ರ ! ಪ್ರತಿಕಾರ್ಯ ಕಲಾ ಪಕ್ಕೂ ನೀನೇ ಪ್ರೇರಕನಷ್ಟೆ ?
ಅಚಲ:-ತಾಯಿ! ನಾನು ಏನನ್ನೂ ಹೇಳಲಾರೆನು; ತಾವು ಹಿರಿ ಯರು; ಹೇಗೆ ಕಲ್ಪಿಸಿ ಹೇಳಿದರೂ ಸಮ್ಮತವೇಸರಿ. ನಗೇಶ:- ಹೂಂ! ಈಗ ನಾವು ಮಾಡಬೇಕಾದುದೇನಯ್ಯ ? ಮೊದಲು ಅದನ್ನು ಹೇಳು. ಅಚಲ:-ಏನೆಂದರೆ, ನಂದಿನಿಯ ಸಮ್ಮತವನ್ನಲ್ಲವೇ ಕೋರುವುದು? ನಗೇಶ: -- ನಮ್ಮ, ನಂದಿನಿ ? ನಿನ್ನ ಅಭಿಪ್ರಾಯವೇನು? ಈಗ ದೇಶ ಸೇವಾಸಂಘದವರ ಪ್ರಾರ್ಥನೆಗೆ ಏನೆಂದು ಉತ್ತರವನ್ನು ಕೊಡಬೇಕು ? ನಂದಿನಿ:-ಸ್ಥಿರಭಾವದಿಂದ ತಲೆತಗ್ಗಿಸಿ-- ಹಿರಿಯರಲ್ಲಿ ನಾನು ಹೇಳು ವುದೇನಿದೆ? ಹೇಳಿದಂತೆ ಕೇಳುವುದೊಂದಲ್ಲದೆ, ನನಗೆ ಮತ್ತಾವ ಸ್ವಾತಂತ್ರ ವೂ ಇಲ್ಲವಷ್ಟೆ.” ನಗೇಶ:-ಹಾಗಾದರೆ ಸಂತೋಷ. ಇನ್ನು ನಿನ್ನ ಭಾಷಣಕ್ಕೆ ನಾಳಿ ದ್ದಿನ ದಿನವೇ ಗೊತ್ತು ಮಾಡಿ, ಮಹಿಳೆಯರೆಲ್ಲರನ್ನೂ ಸೇರಿಸುವ ಏರ್ಪಾಡು ಮಾಡಬಹುದಲ್ಲವೆ? ನಂದಿನಿ:-ಅದರಲ್ಲಿ ನನ್ನ ಅಭ್ಯಂತರವೇನೂ ಇಲ್ಲ. ಆದರೆ, ಬರುವವ ರಲ್ಲಿ ಅಲಂಕಾರಾದಿಗಳಿಂದ ಬೀಗಿರುವವರುಮಾತ್ರ ಸೇರಿರಬಾರದು. ಅದಿಲ್ಲ ವಾದರೆ ಮಹಿಳೆಯರ ಗುಂಪಿನಲ್ಲಿ ಗದ್ದಲಕ್ಕೆ ಅವಕಾಶವೇ ಇರದಂತಾದೀತು. ಅಚಲ:-ನನಗಿದು ಒಪ್ಪಿತು. ನಗೇಶ:- ಅಯ್ಯ, ಸೇವಾನಂದ! ಭಕ್ತಿಸಾರ!! ಇನ್ನ್ವ್ಈಇನ್ನೇನನ್ನೂ