ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮಾತೃನಂದಿನಿ

ಇವುಗಳೆಲ್ಲವೂ ನಮಗೆ ಪರಮಾದರ್ಶ ವಿಚಾರಗಳಾಗಿರುವುವು. ಅವುಗಳನ್ನು ಮಾದರಿಯಾಗಿಟ್ಟು, ನಮ್ಮ ಕರ್ತವ್ಯವನ್ನು ನಾವು ಸುಸೂತ್ರವಾಗಿ ನೆರವೇರಿಸಿಕೊಳ್ಳಬೇಕಲ್ಲದೆ, ಬರಿಯ ಬಾಯಿಮಾತಿಂದ ಹಾರಾಡಿದರೆ ಕೃತಕಾರ್ಯರಾಗಲಾರೆವು, (ನಿಜ, ನಿಜ !)

ಓ, ನಮ್ಮ ದೇಶಬಾಂಧವರೇ !
   ಕೇಳಿರಿ, ನಮ್ಮ ನಂದಿನಿಯ ವಿಚಾರವಾಗಿ ಭಟ್ಟಾಚಾರ್ಯರಾದಿಯಾಗಿ ಈ ಪಟ್ಟಣದ ಮಹಾಜನಗಳು ವಿಕಲ್ಪಾರ್ಥಗಳನ್ನು ಕಲ್ಪಿಸಿರುವರಷ್ಟೇ! ನಮ್ಮ ಅಕ್ಕತಂಗಿಯರು, ಇತರ ಒಡನಾರಿಯರು, ಸಹಚಾರಿಣಿ ಅಥವಾ ನಮ್ಮ ಗೃಹಿಣಿಯರು, ಪ್ರತಿಯೊಬ್ಬರೂ, ನಮ್ಮ ನಂದಿನಿಯಂತೆಯೇ ಆಗಬೇಕು. ನಂದಿನಿಯಲ್ಲಿರುವ ಮನೋಯೋಗಶಕ್ತಿಯನ್ನೇ ಅವಳ ವಿದ್ವತ್ ಸಂಬಂಧವಾದ ಪ್ರಜ್ಞಾವಿಶೇಷಣವನ್ನೇ ನಮ್ಮ ಸ್ತ್ರೀಯರೆಲ್ಲರೂ ಅನುಕರಣೆಮಾಡುವಂತೆ ನಾವು ಅವರಿಗೆ ಶಿಕ್ಷಣವನ್ನು ಕೊಡಬೇಕು. ನಮ್ಮ ವರ್ಗವನ್ನು ಈಗಿರುವಂತೆ ನಮ್ಮ ಅಕಾರಣ ಶಂಕೆಗಳಿಗೆ ಕಾರಣರನ್ನಾಗಿ ಮಾಡಿ, ಕೇವಲ ನಿರ್ಬಂಧದಲ್ಲಿಟ್ಟು ನರಳಿಸುವುದೂ, ಇಲ್ಲವೆ, ನವನಾಗರಿಕತೆಯೆಂಬ ಸನ್ನಿಪಾತಕ್ಕೆ ಪಕ್ಕಾಗಿ, ವಿವಿಧ ವೇಷಭಾಷೆಗಳಿಂದ ಅವರನ್ನು ನಲಿದಾಡಿಸುತ್ತ, ತಾವು ಅವರ ಸೇವಾವೃತ್ತಿಯಲ್ಲಿರುವುದೂ, ಇವೆರಡೂ ಆರ್ಯರಾದ ನಮಗೆ ಸರಿಯಲ್ಲ. ನಮ್ಮ ಮಹಿಳೆಯರನ್ನು-ಆರ್ಯ ಧರ್ಮಪ್ರತಿಷ್ಠಾಪನಾ ಮಹತ್ಕಾರ್ಯದಲ್ಲಿ ಮುಖ್ಯ ಪಾತ್ರರಾಗಿರುವ ಆ ಆದಿಶಕ್ತಿಯರನ್ನು --ನಾವು ನಮ್ಮ ನಿರ್ದುಷ್ಟ ಪ್ರೇಮಸಂಭಾವನೆಯಿಂದಲೇ ಗೌರವಿಸಿ, ನಮ್ಮ ಸಹೃದಯಭಾವನೆಗೆ ಅವರು ನಮ್ಮಲ್ಲಿ ಪ್ರಸನ್ನರಾಗಿ, ನಮ್ಮ ದೇಶಸೇವಾಕಾರ್ಯದಲ್ಲಿ ಸಹಕಾರಿಣಿಯರಾಗಿ ನಿಲ್ಲುವಂತೆ ಮಾಡುವ ಸಾತ್ವಿಕ ವಿದ್ಯೆಯನ್ನು, ಅವರಿಗೆ ನಾವು ಸರ್ವಪ್ರಯತ್ನದಿಂದಲೂ ಕಲಿಸಬೇಕು. ಹೆಚ್ಚೇಕೆ, ಇನ್ನು ಮುಂದೆ ನಮ್ಮ ಕರ್ತವ್ಯಕ್ಕೆ ತಕ್ಕುದಾದ ಶಿಕ್ಷಣಗಳನ್ನೂ ಅವರು ನಮ್ಮಿಂದಲೇ ಪಡೆಯಬೇಕಲ್ಲದೆ, ಅನ್ಯರನ್ನು ಆಶ್ರಯಿಸುವುದಕ್ಕೆ ಅವಕಾಶಕೊಡಬಾರದು. (ಒಪ್ಪಿದೆವು; ತಪ್ಪದೆ ನಡೆವೆವು.) 
 ತಿಳಿದಿರೇ, ಸುಹೃದರೇ !
        ಮತ್ತೊಂದು ವಿಚಾರ,-ಎಂದರೆ, ನಮ್ಮವರ ವಿವಾಹವಿಚಾರ. ಅದೇ