ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತಿ 1:2 ಸತಿಹಿತೈಷಿಣೀ

 ಅಂತಹ ವೃತ್ತಿಯನ್ನು ತಾವೂ ಹಿಡಿಯದೆ, ತಮ್ಮ ಸಂಗಡಿಗರನ್ನೂ ಅದರಲ್ಲಿ ಹೋಗಗೊಡದೆ, ಎತ್ತು-ಚ್ಚರಿಸುತ್ತಿರುವುದೇ ನಾಗರಿಕರ ಲಕ್ಷಣವಲ್ಲದೆ, ಕೇವಲ ಪರಾನುಕರಣ- ವರಾಧೀನ ಮ೦ತ್ರದಿಂದ ಮುಗ್ಧರಾಗಿ ಅನ್ಯಮಾರ್ಗಾನುಸಂಧಾನ ಬುದ್ಡಿಯಿಂದ ಸ್ವಧರ್ಮವನ್ನು ಬಿಟ್ಟು -ಪಾಮರ ಮನೋ ರಂಜನೆಗಾಗಿ ನಲಿದಾಡುವ ನಾಟಕ ಸಂಘದವರಂತೆ ವೇಷಬದಲಾವಣೆ, ಶೃಂಗಾರ, ಆಡಂಬರಗಳೇ ಮೊದಲಾದ ವಿಲಾಸಗಳಲ್ಲಿ ಆಸಕ್ತರಾಗಿ, ಹಗಲಿರುಳೆನ್ನದೆ ಸುತ್ತುತ್ತಿರುವವರನ್ನು ನಾಗರಿಕರೆಂದಾಗಲೀ, ನಾಗರಿಕತೆಯ ಗಂಧವನ್ನು ಬಲ್ಲವರೆಂದಾಗಲೀ ಹೇಳುವಂತಿಲ್ಲ. ಮತ್ತೇನು ಹೇಳಲಿ? ಸೋದರಿಯರೇ!

ಇಷ್ಟನ್ನು ಮಾತ್ರ ಹೇಳಬಲ್ಲೆನು. ನಮ್ಮ ನಡೆನುಡಿಗಳಲ್ಲಿ ಸೇರಿರಬಹುವಾದ ಮೌಡ್ಯಾಚಾರಗಳನ್ನು ನಾವು ಮೊದಲು ದೂರದಲ್ಲಿ ಕಟ್ಟೀಡಬೇಕು. ನಮ್ಮವರು. ಒಬ್ಬರನ್ನು ಮತ್ತೊಬ್ಬರು ದ್ವೇಷಿಸಿ ತಮ್ಮ ಸುಖಕ್ಕೆ ತಾವೇ ತಮ್ಮ ಕೈಯಿಂದಲೇ ಕಂಟಕಗಳನ್ನು ತಂದೊಡ್ಡುತ್ತಿರುವ ದುರಭಿಮಾನವನ್ನು ಬಿಟ್ಟುಬಿಡಬೇಕು. ನಮ್ಮ ಪುರುಷಬಾಂಧವರ ಅಲಸ್ಯ-ಅವಿ ಚಾರ-ಸ್ವಾರ್ಥಪರತೆಗಳಿಂದಲೇ ಪಾತಾಳಕುಹರವನ್ನು ಸೇರಿಹೋಗುತ್ತಿರುವ ಸಮ್ಮಾಸ್ತ್ರೀಜಗತ್ತನ್ನ ನಾವು ನಮ್ಮ ಪೂರ್ವಜರ ಸದುವದೇಶಬಲದಿಂದ ಪುಸರುತ್ಥಾನನಮಾಡಲು ಮತೈಕೈದಿಂದ ದೃಢನಿಶ್ಚಿತವಾಗಿ ಪ್ರಯತ್ನವನ್ನು ಕೈಕೊಳ್ಳಬೇಕು. ನಮ್ಮ ಮಕ್ಕಳಿಗೆ ನಾವು ಮೊದಲು ಕೊಡಬೇಕಾದ ಬಾಲ್ಯಶಿಕ್ಷಣದಲ್ಲಿ ಆದಿಯಿಂದಲೂ ಅವರ ಪ್ರತಿಯೊಂದು ರಕ್ತಸದಲ್ಲಿಯೂ, ಮಾತಾಪಿತೃಭಕ್ತಿಯೂ, ಸ್ವದೇಶಾಭಿಮಾನವೂ, ಧರ್ಮಶ್ರದ್ದೆಯೂ, ದೇಶಭಾಷಾನುರಾಗವೂ ಚನ್ನಾಗಿ ಧ್ವನಿಸುವಂತೆ ಅವರನ್ನು ಸಮಯೋಚಿತವಾದ ರೀತಿ-ನೀತಿಗಳಿಂದ ಸುಶಿಕ್ಷಿತರನ್ನಾಗಿ ಮಾಡಬೇಕು. ಸುಶಿಕ್ಷೆಯಲ್ಲಿ ನಾವು ಸ್ವಲ್ಪಮಾತ್ರ ಉದಾಸೀನರಾಗಿದ್ದರೂ, ಅವರು ಮುಂದೆಮಂದಿಗಳಾಗುವುದಕ್ಕೆ ಕಷ್ಟವಾಗುವುದು. ಇದು ಚೆನ್ನಾಗಿ ತಿಳಿದಿರಲಿ. ಮತ್ತು ನಮ್ಮ ಸ್ತ್ರೀಶಿಕ್ಷಣವು ಯಾವ ಬಗೆಯಾಗಿ ಸುಧಾರಿಸಲ್ಪಡಬೇಕೆಂದರೆ, ಬಾಲ್ಯ ಶಿಕ್ಷಣಕ್ಕಾಗಿ, ಸೊಕ್ಕಿನ ಮಕ್ಕಳಲ್ಲಿ ನಮ್ಮ ಹುಡುಗಿಯರನ್ನು ಒಪ್ಪಿಸುವುದನ್ನು ತಪ್ಪಿಸಬೇಕು. ಅಂತವರಿಂದಾಗಲೀ, ಕೇವಲ ವಿಡಂಬನದಲ್ಲಿ ನಿಪುಣೆಯ