ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೭೩ತೃತೀಯಾಕಂ.

ಕಂಸ:-ಸರಿ ! ನನ್ನಭಿಪ್ರಾಯವನ್ನೇ ಎಲ್ಲರೂ ವ್ಯಕ್ತಪಡಿಸಿದಿರಿ.
ನಮ್ಮ ದೇಶದ ಸಂಗೀತಗಾರರೆಲ್ಲರೂ ಇನ್ನು ಮೇಲೆ ಸಪ್ತಸ್ವರಗಳನ್ನು,
ಸ-ರ-ಗ-ಮ-ಪ-ದ-ನ-ಎಂತಲೇ ಹಾಡತಕ್ಕದ್ದೆಂದು ತೀರ್ಮಾನಿಸಿರುವೆನು.

ವಿದ್ವಾಂಸ:- ಪರಂತು ಇದೂ ಒಂದರ್ಥಕ್ಕೆ ಸರಿಹೋಗುತ್ತದೆ.
ಇವರು ತೀರ್ಮಾನಿಸಿದಂತೆ, “ಸ-ರ-ಗ-ಮ-ದ-ದ-ನ” ಎಂಬ ಸ್ವರಗಳ
ಆ ಒಂದೊಂದನ್ನೇ ವಿವರಿಸಿದರೆ, “ಸ” ಸಮಸ್ತ “ರ” ರಕ್ಕಸರ “ಗ”
ಗರ್ವವೂ, “ ಮ” ಮದವೂ, “ಪ" ಪಟಾಟೋಪವೂ, “ದ” ದರ್ಪ
ವೂ, “ನ” ನಶಿಸಿಹೋಗುತ್ತವೆ. ಅಥವಾ ರಾಕ್ಷಸರೆಲ್ಲರೂ ನಾಶವಾಗ
ತಕ್ಕ ಕಾಲವು ಸಮೀಪಿಸಿದೆ, ಎಂದರ್ಥವಾಗುತ್ತದೆ.

      (ಎಂದು ಬೆರಳುಗಳನ್ನೆಣಿಸುತ್ತ, ಅರ್ಥ ಮಾಡುತ್ತಿರುವ ವಿದ್ವಾಂ
ಸನನ್ನು ನೋಡಿ ಅಸುರರೆಲ್ಲರೂ ನಗುವರು.)

ವಕ್ರವದನೆ:-ಎಲೈ ಮಂಕುಸಿದ್ದನೇ ! ಸ್ವರಗಳ ಉಚ್ಚಾರಣೆ
ಯನ್ನು ಕುರಿತ ನಮ್ಮ ತೀರ್ಮಾನವು ಈಗಲಾದರೂ ತಿಳಿಯಿತೊ? ಅದ
ರಂತೆ ಹೇಳುವೆಯಾ?

ವಿದ್ವಾಂಸ:-ಕಿಂ?

ವಕ್ರವದನೆ:-ಅಯ್ಯೋ, ಬೆಪ್ಪುನಾಥನೇ ! ನಿನಗೆ "ಕಿಂ” ಒಂದೇ
ಗೊತ್ತು, ಬೇಕಾದರೆ ನಾನೊಂದು ಹತ್ತು ಹೇಳುವನು, ಕಲಿತುಕೊ.
ಕಿಂ-ಚಂ-ಗಂ-ಲಂ-ಭಂ-ಡಂ-ಹಂ-ಹ್ರಾಂ-ಹ್ರೀಂ-ಹೀ೦-“ಹ್ರೂಂ”

ಅಸುರರೆಲ್ಲರೂ:-(ಒಂದೇ ಧ್ವನಿಯಿಂದ) ಬೇಷ್ ಬೇಷ್! ಆ
ಹೊಸ ಪಂಡಿತನು ಬಾಯಿತಪ್ಪಿ “ ಕಿಂ ” ಎಂಬ ಒಂದು ಮಾತನ್ನಾಡಿದ್ದ
ಕ್ಕೆ ನಮ್ಮ ವಕ್ರವದನೆ ನೋಡಿದಿರೋ ಪಟಪಟನೆ ಹತ್ತು ಮಾತುಗಳಾಡಿ
ಪಂಡಿತನ ಬಾಯಿ ಮುಚ್ಚಿಸಿಬಿಟ್ಟಳು! ಭಳಿರೇ ವಕ್ರವದನೆ! ಪಂಡಿತಳೆಂ
ದರೆ ನೀನೇ ಸರಿ ! (ಎಂದೆಲ್ಲರ ಚಪ್ಪಾಳೆ ತಟ್ಟುವರು.)

ವಿದ್ವಾಂಸ:- ಅಪ್ಪಟವಾಯಿತು. ಈ ಮೂರ್ಖ ಶಿಖಾಮಣಿಗಳ
ಬಳಿಯಲ್ಲಿ ನನ್ನ ಪಾಂಡಿತ್ಯವೇನೂ ಜರುಗುವ ಹಾಗೆ ಕಾಣಲಿಲ್ಲ. ನಾನಿ
ನ್ನು ಹೊರಡುವುದೇ ಲೇಸು. (ಎಂದು ಯೋಚಿಸುತ್ತಿರುವನು.)

ಕಂಸ:-ಏನಯ್ಯಾ ! ಈ ಸ್ವರಗಳ ಹೊರತು ಮತ್ತೇನೂ ಬರು
ವುದಿಲ್ಲ ಕಂ ?