೬೪ಕೃಷ್ಣಲೀಲೆ
'ಅಸುರರು:-(ಆರ್ಭಟದಿಂದ) ಒಂದು !
ಕಂಸ:--ಋಷಿ ಮುನಿಗಳ ಯಜ್ಞಯಾಗಗಳನ್ನು ಧ್ವಂಸಮಾ
ಡಿ ಅವರನ್ನು ಹಿಡಿದು ಅಗ್ನಿ ಗುಂಡಗಳಲ್ಲಿ ಹಾಕುವುದು.
ಅಸುರರು:-ಎರಡು!
ಕಂಸ:-ಗೋವುಗಳನ್ನು ಕೊಂದು ಭಕ್ಷಿಸುವುದು.
ಅಸುರರು:-ಮೂರು!
ಕಂಸ:-ಎಲ್ಲಿ ವೇದಾಧ್ಯಯನ ನಡೆಯುವುದೋ ಅಲ್ಲಿಗೆ ನುಗ್ಗಿ
ಅಲ್ಲಿರ ತಕ್ಕವರನ್ನೆಲ್ಲಾ ಹಿಡಿದು ಚಪ್ಪರಿಸುವುದು.
ಅಸುರರು:-ನಾಲ್ಕು !
ಕಂಸ:-ಪತಿವ್ರತಾ ಸ್ತ್ರೀಯರನ್ನು ಹಿಡಿದು ಭಂಗಪಡಿಸುವುದು.
ಅಸುರರು:-ಭಾಪು ! ಭಾಪು ! ಐದು !
ಕಂಸ:-ಯಾವ ಮನೆಯಲ್ಲಿ ಹರಿಕಥಾ ಕಾಲಕ್ಷೇಪವು ನಡೆಯು
ವುದೋ ಆ ಮನೆಯನ್ನು ಗೋಡೆಗಳ ಸಹಿತ ನೆಲಕ್ಕೆ ಕಡಹುವುದು.
ಅಸುರರು:-ಆರು!
ಕಂಸ:- ಆರು ಕಾರಗಳನ್ನೂ ನಿರ್ದಾಕ್ಷಿಣ್ಯವಾಗಿ ನಡಿ ಸಬೇಕು,
ಅಸುರರ ::-..ಇಷ್ಟೆನೋ ?
ಕಂಸ:-ಅಷ್ಟೇ ಇಲ್ಲ ಮತ್ತೊಂದು ಮುಖ್ಯವಾದ ವಿಷಯವಿದೆ.
ಅಸುರರು:-ಆದೇನದೇನು ?
ಕಂಸ:-ನನ್ನನ್ನು ಕೊಲ್ಲತಕ್ಕ ಬಾಲಕನು ಎಲ್ಲಿಯೋ ಬೆಳೆಯು
ತ್ತಿರುವನೆಂದು ಕೇಳಿದೆವಲ್ಲವೆ?
ಅಸುರರು:-ಆಹುದು!
ಕಂಸ:-ಆ ಸಂಶಯವನ್ನು ಪರಿಹಾರ ಮಾಡಿಕೊಳ್ಳಬೇಕಲ್ಲವೆ ?
ಅಸುರರು:-ಹೇಗೆ ಮಹಾಪ್ರಭೂ!
ಕಂಸ:-ನೀವೆಲ್ಲರೂ ಸರ್ವ ಪ್ರಯತ್ನದಿಂದಲೂ, ಕಟ್ಟಿದ ಮನೆ
ಯನ್ನು ಬಿಡದೇ ಹುಡುಕಿ, ಸಂಣ ಸಂಣ ಬಾಲಕರನೂ , ಎಳೆ ಮಕ್ಕ
ನ್ನೂ ಕಂಡ ಕೂಡಲೇ ಧ್ವಂಸಮಾಡಬೇಕು.
ಪುಟ:ಶ್ರೀ ಕೃಷ್ಣ ಲೀಲೆ.djvu/೮೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ