೮೦ಕೃಷ್ಣಲೀಲೆ
ವಸಂತಮಾಲತಿ:-ಕೆಲವರಿಗೆ ಶೇಷಶಾಯಿಯಾಗಿಯೂ, ಕೆಲವ
ರಿಗೆ ಕೋದಂಡಪಾಣಿಯಾಗಿಯೂ, ಕೆಲವರಿಗೆ ನವಮನ್ಮಥಾಕಾರನಾಗಿ
ಯೂ, ಕೆಲವರಿಗೆ ಪೀತಾಂಬರಧಾರಿಯಾಗಿಯೂ, ಕೆಲವರಿಗೆ ಮನೋ
ಹರನಾದ ಮುದ್ದಕಂದನಾಗಿಯೂ ಕಾಣಿಸಿದನಂತೆ!
ಇಂದುಶೇಖೆ:- (ತನ್ನಲ್ಲಿ) ಏನಿದು, ವಿಚಿತ್ರವಾಗಿರುವುದಲ್ಲಾ!
ಒಳ್ಳೆಯದು! ಆಗಲಿ. ಈಗಲೇ ನಾನೂ ನೋಡುವೆನಲ್ಲಾ! ನನಗೆ ಹೇಗೆ
ಕಾಣುವನೋ ಅದನ್ನೂ ನೋಡಿ, ತದ ನಂತರ ಬಾಲಕನ ಮಹಿಮೆ
ಯನ್ನು ನಿಶ್ಚಯಿಸುವೆನು.
ವಸಂತಮಾಲತಿ:-ಯಾರು ಯಾರು ಯಾವ ಯಾವ ಭಾವದಿಂ
ದ ನೋಡಿದರೆ, ಅವರವರಿಗೆ ಆಯಾ ರೂಪದಿಂದಲೇ ಕಾಣಿಸುವನೆಂದು
ಬ್ರಹ್ಮವೇತ್ತರಾದ ಗರ್ಗಾಚಾರ್ಯರೇ ಹೇಳಿರುವಾಗ ನೀನು ಪರೀಕ್ಷಿಸಿ
ಮಾಡುವುದಾದರೂ ಏನು?
ಇಂದುಶೇಖೆ:-ಒಳ್ಳೆಯದು. ಲತಾಂಗಿಯರೇ ! ನಡೆಯಿರಿ,
ಹೋಗುವ
[ಗೋಪ ಸುಂದರಿಯರೆಲ್ಲರೂ ಯಶೋದಾದೇವಿಯು ಮನೆಗೆ
ತೆರಳುವರು.]
ಪ್ರದೇಶ:- ನಂದಗೋಪನ ಮನೆ.
(ಯಶೋದಾದೇವಿಯು ಶ್ರೀಕೃಷ್ಣನನ್ನು ಲಾಲಿಸುತ್ತಿರುವಳು.
ಗೋಪ ವನಿತೆಯರು ಪ್ರವೇಶಿಸಿ, ಯಶೋದೆಗೆ ವಂದಿಸುವರು.]
ಯಶೋದೆ:- ಎಲ್ಲರಿಗೂ ವಂದಿಸುವೆನು. ದಯಮಾಡಿಸಿರಿ.
ಇಷ್ಟು ದಿನಕ್ಕೆ ಸಲುವಾಗಿ ಈಗಲಾದರೂ ಬಂದಿರಲ್ಲ ! ಇದೇ ನನ್ನ
ಪುಣ್ಯೋದಯವು. ಈ ದಿನವೇ ಸುದಿನವು, ಈ ಪೀಠಗಳನ್ನಲಂಕರಿಸಿರಿ.
[ಗೋಪಿಯರೆಲ್ಲರೂ ಪೀಠಗಳಮೇಲೆ ಕೂಡುವರು.]
ಇಂದುಶೇಖೆ:-ಅಮ್ಮಾ ಯಶೋದೆ ! ನಿನ್ನ ಮುದ್ದು ಕುಮಾರನ
ಲವಣಾತಿಶಯಗಳನ್ನು ಈವರಿವಿಗೂ ಕೇಳಿ ಸಂತೋಷಪಡುತ್ತಿದ್ದೆವು.
ಈದಿವಸ ಕಣ್ಣಾರೆ ನೋಡಿ ಸಂತೋಷಪಡಬೇಕೆಂದು ಬಂದೆವು.
ಕಳಾವತಿ:-ದೇವೀ! ನಿನ್ನ ಮುದ್ದು ಕಂದನೆಲ್ಲಿರುವನು ? ಬೇಗನೆ
ಕರೆತರಿಸು.
ಪುಟ:ಶ್ರೀ ಕೃಷ್ಣ ಲೀಲೆ.djvu/೯೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ