ಪುಟ:Banashankari.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಬನಶಂಕರಿ ೨೧೬ "ಬಾ ರಾಜ, ಬಿಸಿಲಲ್ಲೆ ಸೈಕಲೆ ಸವಾರಿ ತುಂಬ ಇಷ್ಟವೇನು ನಿಂಗೆ?" "ರಮಾ, ಅಮ್ಮಿಗೆ ಸಕತ್ ಕಾಯಿಲೆ, ಕಾಗದ ಬಂತು,ತಂತಿ ಬಂತು,ತುಂಬಾ ಸೀರಿಯಸ್ಸೇ ಆಗಿರ್ಬೇಕು." "ಹೋಗ್ತೀಯೇನು?"

"  ಹಗಲೂ ರಾತ್ರೆ ನಮ್ಮ ಹೆಸರು ಹಿಡಿದು ಹಂಬಲಿಸಾಳಂತೆ, ರಾಜ-ಸುಶೀಂತ. ತಂಗಿಯಂತೂ ಬರೋಹಾಗಿಲ್ಲ. ನಾನಾದರೂ ಹೋಗ್ರಿಡ್ತೀನಿ, ಆಗ್ಗೆ ?"

"ಈ ಸಾರೆ ಪರೀಕ್ಷೆ-----" "ಈ ಪರಿಸ್ಥಿತೀಲಿ ಕರ್ತವ್ಯ ಯಾವುದು ಹೇಳು." "ತಾಯಿನೂನ ನೋಡೋದು." ಹೌದು ರಮಾ, ಆಕೆಗೆ ಬೇರೆ ಯಾರಿದ್ದಾರೆ ಹೇಳು ?” ರಮಾ,ಮುಖ ಬಾಗಿಸಿ ಕ್ಷಣಕಾಲ ಕುಳಿತವಳು ತಲೆ ಎತ್ರಿ ಕೇಳಿದಳು: "ನಾನೂ ಬರಲೇ ರಾಜ?" "ನೀನು?" "ಹೂಂ.ನಂಗೆ ನಿಮ್ಮಮ್ಮನ ಆಶೀರ್ವಾದ ಬೇಕು." ರಾಜಣ್ನ ಒಂದು ಕ್ಷಣ ಹಿಂದುಮುಂದು ನೋಡಿದ. "ಸರಿ ರಮಾ,ಹೊರಡೋಣ,ನಿಮ್ಮ ತಾಯಿ ಕೇಳು." "ಒಳಗಿದಾಳೆ,ನಾನು ಕೇಳ್ತೀನಿ.ಆಯೋಚ್ನೆ ಬೇಡ.ಹೊರಡೋದು ಎಷ್ಟು ಗಂಟೆಗೆ?" "ರಾತ್ರೆ ರೈಲು, ಕಡೂರಲ್ಲಿಳಿದು ಬಸ ಹತ್ತಿ ಹೋಗೋಣ.,ಇಲ್ಲಿಗೆ ಎಂಟು ಗಂಟೆಗೆ ಬರ್ತಿನಿ." "ದುಡ್ಡೆಷ್ಟು ಬೇಕು?" "ನನ್ಹತ್ರ ಇದೆ ಸಾಕಷ್ಟು..." ...ರೈಲು-ಮೋಟಾರುಗಳು ರಾಜಣ್ನನನ್ನೂ ರಮೆಯನ್ನೂ ಜೀವನಹಳ್ಲಿಗೆ ತಂದು ಮುಟ್ಟಿಸಿದವು, ಅವರು ಶಾನುಭೋಗರ ಮನೆ ತಲುಪಿದ್ದು ಮರುದಿನ ಮಧ್ಯಾಹ್ನದ ಅನಂತರ. ರಾತ್ರೆಯೆಲ್ಲ ನಿದ್ದೆಯಿಲ್ಲದೆ ಸಂಕಟ ಪಡುತ್ತಿದ್ದ ಅಮ್ಮಿಗೆ ಅದೇ ಆಗ ಜೊಂಪು ಹತ್ತಿತ್ತು. ಒಂದು ಮಂಚದ ಮೇಲೆ ಮೆತ್ತನೆಯ ಹಾಸಿಗೆ ಹಾಸಿ ಮಲಗಿಸಿದ್ದರು ಆಕೆಯನ್ನು, ಕಾವೇರಮ್ಮ ಬದಿಯಲ್ಲಿ ಕುಳಿತು ಕೈಲಿ ಬೀಸಣಿಗೆ ಹಿಡಿದು ಗಾಳಿ ಬೀಸುತ್ತಿದ್ದಳು.

   ರಾಜಣ್ನನನ್ನು ನೋಡಿ ಕಾವೇರಮ್ಮನ ಮುಖ ಅರಳಿತು.

ತುದಿಗಾಲ ಮೇಲೆ ನಡೆಯುತ್ತ ಹೊರಬಂದು ಆಕೆಯೆಂದಳು; "ಅಂತೂ ಬಂದೆಯಲ್ಲಪ್ಪ,ಬಾ....ಮೋಟಾರು ಶಬ್ದ ಕೇಳಿದಾಗಲೇ,ನೀನೀಗ ಬರಬಹುದೂಂತಿದ್ದೆ," "ಹ್ಯಾಗಿಬದೆ ಈಗ?" "ಹಾಗೇ ಇದೆ ರಾಜಣ್ನ,ನಿದ್ದೆ ಹೋಗಿದಾಳೆ."