ಅಂಗಕ್ಕೆ ಆಚಾರಳವಟ್ಟಲ್ಲಿ ಆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗಕ್ಕೆ ಆಚಾರಳವಟ್ಟಲ್ಲಿ ಆ ಲಿಂಗಕ್ಕೆ ಅಂಗವೆ ಅರ್ಪಿತ. ಪ್ರಾಣಕ್ಕೆ ಪ್ರಸಾದ ಸಾಧ್ಯವಾದಲ್ಲಿ ಆ ಲಿಂಗಕ್ಕೆ ಆ ಪ್ರಾಣವೆ ಅರ್ಪಿತ. ಮನವು ಮಹವನಿಂಬುಗೊಂಡಲ್ಲಿ ಆ ಲಿಂಗಕ್ಕೆ ಮನವೆ ಅರ್ಪಿತ. ಭಾವಭ್ರಮೆಯಳಿದು ನಿಭ್ರಾಂತುವಾದಲ್ಲಿ ಆ ಲಿಂಗಕ್ಕೆ ಆ ಭಾವವೆ ಅರ್ಪಿತ. ಜ್ಞಾತೃ ಜ್ಞಾನ ಜ್ಞೇಯ ಸಂಪುಟವಾಗಿ
ಅರಿವು ನಿರ್ಣಯಿಸಿ ನಿಷ್ಪತಿಯಾಗಿ ಕುರುಹುಗೆಟ್ಟಲ್ಲಿ ಆ ಲಿಂಗಕ್ಕೆ ಆ ಅರಿವೆ ಅರ್ಪಿತ. ಇಂತು
ಸರ್ವಾಂಗವರ್ಪಿತವಾದ ಲಿಂಗಕ್ಕೆ ಒಡೆತನವನಿತ್ತ ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ ನಾನೆಂದೆನಲರಿಯದೆ ನಿಂದ ನಿಜದ ಮಹಾಪ್ರಸಾದಿ.