ಅಂಗದಲ್ಲಿ ಗುರುಲಿಪಿಯ ತಿಳಿಯಬೇಕು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗದಲ್ಲಿ ಗುರುಲಿಪಿಯ ತಿಳಿಯಬೇಕು
ಮನದಲ್ಲಿ ಲಿಂಗಲಿಪಿಯ ತಿಳಿಯಬೇಕು
ಜೀವದಲ್ಲಿ ಜಂಗಮಲಿಪಿಯ ತಿಳಿಯಬೇಕು
ಪ್ರಾಣದಲ್ಲಿ ಪ್ರಸಾದಲಿಪಿಯ ತಿಳಿಯಬೇಕು. ಈ ಚತುರ್ವಿಧವೇಕವಾದ ಅನುಭವಲಿಪಿಯ ತಿಳಿದು ನೋಡಲು ಮಹಾಲಿಂಗಲಿಪಿ ಕಾಣಬಂದಿತ್ತು. ಆ ಮಹಾಲಿಂಗಲಿಪಿಯ ಮುಟ್ಟಿದ ಸುಜ್ಞಾನಿ ಬಚ್ಚ ಬರಿಯ ನಿರಾಳ
ನೀನೇ ಕೂಡಲಚೆನ್ನಸಂಗಮದೇವಾ.