ವಿಷಯಕ್ಕೆ ಹೋಗು

ಅಂಗದಲ್ಲಿ ಲಿಂಗವರತು, ಲಿಂಗದಲ್ಲಿ

ವಿಕಿಸೋರ್ಸ್ದಿಂದ


ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗದಲ್ಲಿ ಲಿಂಗವರತು
ಲಿಂಗದಲ್ಲಿ ಅಂಗವರತು ಒಡಲುಪಾಧಿ ಎಂಬುದಿಲ್ಲ ನೋಡಾ ! ನಿಂದಡೆ ನೆಳಲಿಲ್ಲ ಸುಳಿದಡೆ ಹೆಜ್ಜೆಯಿಲ್ಲ
ಅಪರಿಮಿತ ಘನಮಹಿಮನನೇನೆಂಬೆನಯ್ಯಾ ! ಶಬ್ದವನರಿದು ಸಾರಾಯನಲ್ಲ
ಗತವಿಡಿದು ಅಜಡನಲ್ಲ
ಈ ಎರಡೂ ಅಳಿದುಳಿದ ನಿಶ್ಚಿಂತನು ತನಗೆ ತಾ ನಿಜವಾದ
ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುದೇವರ ಪಾದಕ್ಕೆ ನಮೋ ನಮೋ ಎನುತಿರ್ದೆನು.