ವಿಷಯಕ್ಕೆ ಹೋಗು

ಅಂಗದ ಕಂಗಳ ಕಳೆಯೊಳಗೊಂಡು

ವಿಕಿಸೋರ್ಸ್ದಿಂದ


ಲೇಖಕರು: Tomtada Siddalingeshwara ShivaYogigaLu
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗದ ಕಂಗಳ ಕಳೆಯೊಳಗೊಂಡು ಲಿಂಗವ ಕಂಡೆ
ಅದು ಕಾಮಾರಿ ನೋಡಾ. ಆ ಲಿಂಗ ಸಂಗದಿಂದ ಅನಂಗ ಸಂಗವ ಕೊಡಹಿ ಅವಿರಳ ಪರಬ್ರಹ್ಮನಾಗಿ ಅರಿಷಡುವರ್ಗಂಗಳ ಗರ್ವವ ಮುರಿದನು ನೋಡಾ ಶರಣನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.