ವಿಷಯಕ್ಕೆ ಹೋಗು

ಅಂಗದ ಪಾದತೀರ್ಥವ ಲಿಂಗದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗದ ಪಾದತೀರ್ಥವ ಲಿಂಗದ ಮಜ್ಜನಕ್ಕೆರೆವುದು
ಲಿಂಗದ ಪಾದತೀರ್ಥವ ಪಂಚಪಾದಾರ್ಚನೆಯ ಮಾಡುವದು ಮಾಡಿದ ಪ್ರಾಣಂಗೆ ಪರಿಣಾಮವನೈದಿಸುವದು. ಇಂತೀ ತ್ರಿವಿಧ ಉದಕದ ಭೇದವನರಿಯದೆ
ಅವನೊಬ್ಬ ಮಜ್ಜನಕ್ಕೆರೆದಡೆ ಭವಿಚಾಂಡಾಲರ ಮೂತ್ರದಲ್ಲಿ ಎರೆದಂತೆ ಕಾಣಾ ಕೂಡಲಚೆನ್ನಸಂಗಮದೇವಯ್ಯಾ.