ಅಂಗದ ಭಂಗವ ಲಿಂಗ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಗದ ಭಂಗವ ಲಿಂಗ ಸಂಗದಿಂದ ಪರಿಹರಿಸಬೇಕಯ್ಯ. ಮನೋಮಾಯವ ಅರುಹಿನ ಬಲದಿಂದ ಪರಿಹರಿಸಬೇಕಯ್ಯ. ಜೀವನೋಪಾಧಿಯ ಶಿವಾನುಭಾವದಿಂದ ಹರಿಯಬೇಕು ಕಾಣಿರೋ. ಕರಣದ ಕತ್ತಲೆಯ ಸದಮಲದ ಬೆಳಗನುಟ್ಟು ಪರಿಹರಿಸಬೇಕು ಕಾಣಿರೋ. ಜವ್ವನದ ಹೊರ ಮಿಂಚ
ಕಣ್ಣಿಗೆ ತೋರುವ ಕಾಮಜಾಲಂಗಳ ಶಿವಜ್ಞಾನಾಗ್ನಿಯ್ಲಲ್ವಿಕ್ಕಿ ಸುಟ್ಟುರುಹಿ ಭಸ್ಮವಧರಿಸಬಲ್ಲರೆ ಶರಣನೆಂದೆಂಬೆ; ಉಳಿದವೆಲ್ಲಾ ಹುಸಿಯೆಂಬೆ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.