ಅಂಗಪ್ರಸಾದಿ ಆತ್ಮದ್ರೋಹಿ, ಲಿಂಗಪ್ರಸಾದಿ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಗಪ್ರಸಾದಿ ಆತ್ಮದ್ರೋಹಿ
ಲಿಂಗಪ್ರಸಾದಿ ಲಿಂಗದ್ರೋಹಿ
ಜಂಗಮಪ್ರಸಾದಿ ಜಂಗಮದ್ರೋಹಿ ಎಂದುದಾಗಿ
ಭಾವದಿಂದ ಪ್ರಸಾದವ ಕೊಂಡು
ಅನುಭಾವದಿಂದತಿಗಳೆದಡೆ ಅದು ಪ್ರಸಾದವಲ್ಲ
ಮಾಂಸ. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಸಂಪತ್ತ ಬಸವಣ್ಣನೆ ಬಲ್ಲ.