ಅಂಗವನಾಚಾರಕ್ಕರ್ಪಿಸಿ, ಆಚಾರವನಂಗಕ್ಕರ್ಪಿಸಿ ಆಚಾರಲಿಂಗಪ್ರಸಾದಿಯಾದ.
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಗವನಾಚಾರಕ್ಕರ್ಪಿಸಿ
ಆಚಾರವನಂಗಕ್ಕರ್ಪಿಸಿ ಆಚಾರಲಿಂಗಪ್ರಸಾದಿಯಾದ. ಪ್ರಾಣವ ಲಿಂಗಕ್ಕರ್ಪಿಸಿ
ಆ ಲಿಂಗವ ಪ್ರಾಣಕ್ಕರ್ಪಿಸಿ ಪ್ರಾಣಲಿಂಗಪ್ರಸಾದಿಯಾದ. ದೇಹಭಾವದಹಂಕಾರ ದಾಸೋಹಭಾವದೊಳಗಲ್ಲದೆ ಅಳಿಯದೆಂದು ಲಿಂಗಜಂಗಮಕ್ಕೆ ತೊತ್ತುವೊಕ್ಕು ಲಿಂಗಜಂಗಮಪ್ರಸಾದಿಯಾದ. ಸತ್ಯಶರಣರ ಅಂಗಳದೊಳಗೆ ಬಿದ್ದಗುಳನೆತ್ತಿಕೊಂಡಿಪ್ಪೆನೆಂದು
ನಿಮ್ಮ ಪ್ರಸಾದದ ಕುಳಿಯೊಳಗೆ ಹನ್ನೆರಡು ವರ್ಷ ನಿರಂತರ ಪ್ರಸಾದಿಯಾಗಿರ್ದ
ಕೂಡಲಚೆನ್ನಸಂಗಮದೇವರಲ್ಲಿ ಮರುಳಶಂಕರದೇವರ ಶ್ರೀಪಾದದ ಘನವನು ನಿಮ್ಮಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ.