ಅಂಗವಿಕಾರಿಗೇಕೊ ಏಕಭಾಜನ ಲಿಂಗದೊಡನೆ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಅಂಗವಿಕಾರಿಗೇಕೊ
ಲಿಂಗದೊಡನೆ
ಏಕಭಾಜನ
?
ಆತ್ಮಸುಖಿಗೇಕೊ
ಲಿಂಗದೊಡನೆ
ಏಕಭಾಜನ
?
ಹುಸಿ
ಡಂಭಕಗೇಕೊ
ಲಿಂಗದೊಡನೆ
ಏಕಭಾಜನ
?
ಜಾರಚೋರಂಗೇಕೊ
ಲಿಂಗದೊಡನೆ
ಏಕಭಾಜನ
?
ನಮ್ಮ
ಅಖಂಡೇಶ್ವರನ
ನಿಜವನರಿಯದವರಿಗೇಕೊ
ಪರಮ
ಶಿವಲಿಂಗದೊಡನೆ
ಏಕಭಾಜನ
?