ಅಂಗವಿಕಾರ ಆಚಾರದೊಳಡಗಿ, ಆಚಾರಕ್ರೀಗಳು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗವಿಕಾರ ಆಚಾರದೊಳಡಗಿ
ಆಚಾರಕ್ರೀಗಳು ಗುರುವಿನೊಳಡಗಿ
ಗುರುವೆನ್ನ ಅಂಗದೊಳಗಡಗಿ; ಅಂಗ ಲಿಂಗನಿಷೆ*ಯೊಳಡಗಿ
ಲಿಂಗನಿಷೆ* ಅಂಗದಾಚರಣೆಯ ಆಚಾರವಾವರಸಿ
ಆಚಾರದ ನಿಲವ ಗುರುಮೂರ್ತಿಯಾವರಸಿ
ಗುರುಮೂರ್ತಿಯ ಸರ್ವಾಂಗವಾವರಸಿ
ಸರ್ವಾಂಗವ ಲಿಂಗನಿಷೆ*ಯಾವರಿಸಿ
ಲಿಂಗನಿಷೆ*ಯ ಸಾವಧಾನವಾವರಿಸಿ
ಸಾವಧಾನವ ಸುವಿಚಾರವಾವರಿಸಿ
ಸುವಿಚಾರವ ಮಹಾಜ್ಞಾನವಾವರಿಸಿ
ಮಹಾಜ್ಞಾನದೊಳಗೆ ಪರಮಾನಂದನಿಜನಿಂದು ನಿಜದೊಳಗೆ ಪರಮಾಮೃತ ತುಂಬಿ_ ಮೊದಲ ಕಟ್ಟೆಯನೊಡೆದು
ನಡುವಣ ಕಟ್ಟೆಯನಾಂತು ನಿಂದು
ನಡುವಣ ಕಟ್ಟೆಯೂ ಮೊದಲ ಕಟ್ಟೆಯೂ ಕೂಡಿ ಬಂದು
ಕಡೆಯಣ ಕಟ್ಟೆಯನಾಂತುದು. ಈ ಮೂರುಕಟ್ಟೆಯೊಡೆದ ಮಹಾಜಲವನು ಪರಮಪದವಾಂತುದು. ಆ ಪದದಲ್ಲಿ ನಾನು ಎರಗಿ
ಪಾದೋದಕವ ಕೊಂಡು ಎನ್ನ ನಾನರಿಯದಾದೆ ಕಾಣಾ ಗುಹೇಶ್ವರಾ.