ಅಂಗವಿಲ್ಲದ ಅನಾಮಯನ ಕಂಗಳಿಲ್ಲದೆ
ಗೋಚರ
ಲೇಖಕರು: Tomtada Siddalingeshwara ShivaYogigaLu
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಅಂಗವಿಲ್ಲದ ಅನಾಮಯನ ಕಂಗಳಿಲ್ಲದೆ ಕಂಡೆ. ಕಾಯವಿಲ್ಲದೆ ಅಪ್ಪಿದೆ. ಮನವಿಲ್ಲದೆ ನೆನೆದೆ. ಭಾವವಿಲ್ಲದೆ ಭಾವಿಸಿ ಮಾಯವಿಲ್ಲದೆ ಸಂಗವ ಮಾಡಿ ನಿಸ್ಸಂಗಿಯಾದೆನು. ನಿರುಪಾಧಿಕ ನಿಷ್ಕಳಂಕ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.