ವಿಷಯಕ್ಕೆ ಹೋಗು

ಅಂಗವ ಬಿಟ್ಟು ಹೋಹ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗವ ಬಿಟ್ಟು ಹೋಹ ಪ್ರಾಣಕ್ಕೆ ಲಿಂಗವಿಲ್ಲ ಎಂದೆಂಬರು
ಒಡಂಬಡಿಸಿಹೆನು ಕೇಳಿರಣ್ಣಾ. ಹಿಂಗಿದ ಪುಷ್ಪದ ಪರಿಮಳವನುಂಡೆಳ್ಳು ಅವು ತಮ್ಮಂಗವ ಬಿಟ್ಟು ಹೋಹಾಗ ಕಮ್ಮೆಣ್ಣೆಯಾಗದಿಪ್ಪುವೆ ? ಲಿಂಗೈಕ್ಯರು ಅಳಿದಡೆ
ಕೈಲಾಸದಲ್ಲಿ ತಮ್ಮ ಇಷ್ಟಲಿಂಗಸಹವಾಗಿಪ್ಪರು ನೋಡಾ ಕೂಡಲಚೆನ್ನಸಂಗಮದೇವಾ.