ಅಂಗಾಲಕಣ್ಣವರ ಪದವಿ ಅವರಿಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗಾಲಕಣ್ಣವರ ಪದವಿ ಅವರಿಗೆ ಇರಲಿ. ಮೇಗಾಲಕಣ್ಣವರ ಪದವಿ ಅವರಿಗೆ ಇರಲಿ. ಮೈಯೆಲ್ಲಾ ಕಣ್ಣವರ ಪದವಿ ಅವರಿಗೆ ಇರಲಿ. ಪಂಚಮುಖ ನೊಸಲಕಣ್ಣು ನಂದಿವಾಹನರಪ್ಪ ಗಂಗೆವಾಳುಕ ಸಮಾರುದ್ರರ ಪದವಿ ಅವರಿಗೆ ಇರಲಿ. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಪದಗಳು ಅವರಿಗೆ ಇರಲಿ. ಎನಗೆ ಆವ ಫಲವು ಬೇಡ. ಆವ ಪದವೂ ಬೇಡ. ನಾನು ನಿಮ್ಮ ಪದದೊಳಗಡಗಿ
ಎನಗೆ ನಿನಗೆ ಭಿನ್ನವಿಲ್ಲದಿಪ್ಪ ಪರಮ ಭಕ್ತಿಸಂಪದವನೆ ಕೊಡಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.