ಅಂಗಾಲಿಂದ ಮೊಕಾಲ ಪರಿಯಂತರ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಗಾಲಿಂದ ಮೊಕಾಲ ಪರಿಯಂತರ ಬಸವಣ್ಣ ಮೊಳಕಾಲಿಂದ ಕಂಠ ಪರಿಯಂತರ ಚೆನ್ನಬಸವರಾಜದೇವರು ಕಂಠದಿಂದ ಮೇಲೆ ಪ್ರಭುದೇವರು. ಒಂದು ವಸ್ತು ಎರಡಾಯಿತ್ತು
ಎರಡು ವಸ್ತು ಮೂರಾಯಿತ್ತು. ಆ ಮೂರುವಸ್ತುವನು ತಿಳಿದು ನೋಡಿದಡೆ ಕೂಡಲಚೆನ್ನಸಂಗಯ್ಯನಲ್ಲಿ ಒಂದೆಯಾಯಿತ್ತು