ಅಂಗೈ ತಿಂದುದೆನ್ನ
ಕಂಗಳು ಕೆತ್ತಿಹವಯ್ಯಾ ಬಂದಹರಯ್ಯಾ ಪುರಾತರೆನ್ನ ಮನೆಗೆ ಬಂದಹರಯ್ಯಾ ಶರಣರೆನ್ನ ಮನೆಗೆ. ಕಂಡ ಕನಸು ದಿಟವಾಗಿ ಜಂಗಮ ಮನೆಗೆ ಬಂದರೆ ಶಿವಾರ್ಚನೆಯ ಮಾಡುವೆ ಕೂಡಲಸಂಗಮದೇವಯ್ಯಾ ನಿಮ್ಮ ಮುಂದೆ. 372