ಅಂಗ ಲಿಂಗಕ್ಕೆ ಭಾಜನರೆಂಬರು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗ ಲಿಂಗಕ್ಕೆ ಭಾಜನರೆಂಬರು
ಅಂಗ ಲಿಂಗಕ್ಕೆ ಭಾಜನವಲ್ಲ. ಕಾಯಗುಣಂಗಳ ಕಳೆದುಳಿದು ಮಾಯಾಮಲವ ಹಿಂಗಿಸಿ
ಮನವೆಂಬ ಘನಪರಿಯಾಣವ ಬೆಳಗಿ
ಸಕಲ ಇಂದ್ರಿಯಗಳೆಂಬ ಕೆಲವಟ್ಟಲವ£ಳವಡಿಸಿ
ಜ್ಞಾನಪ್ರಕಾಶವೆಂಬ ದೀಪಸ್ತಂಭ ಬೆಳಗಿ
ಷಡಾಧಾರಚಕ್ರವೆಂಬ ಅಡ್ಡಣಿಗೆಯನಿಟ್ಟು
ಸಕಲಕಾರಣಂಗಳೆಂಬ ಮೇಲುಸಾಧನಂಗ? ಹಿಡಿದು
ಸದ್ಭಕ್ತ್ಯಾನಂದವೆಂಬ ಬೋನವ ಬಡಿಸಿ
ವಿನಯ ವಿವೇಕವೆಂಬ ಅಭಿಘಾರವ ಗಡಣಿಸಿ ಪ್ರಸನ್ನ ಪರಿಣಾಮದ ಮಹಾರುಚಿಯೆಂಬ ಚಿಲುಪಾಲಘಟ್ಟಿಯ ತಂದಿಳುಹಿ
ಸುಚಿತ್ತ ಸುಯಿಧಾನದಿಂದ
ನಿಮ್ಮ ಹಸ್ತದ ಅವಧಾನವೆ ಅನುವಾಗಿ
ಬಸವಣ್ಣನೆ ಬೋನ ನಾನೆ ಪದಾರ್ಥವಾಗಿ ನಿಮ್ಮ ಪರಿಯಾಣಕ್ಕೆ ನಿವೇದಿಸಿದೆನು. ಆರೋಗಣೆಯ ಮಾಡಯ್ಯಾ
ಕೂಡಲಚೆನ್ನಸಂಗಮದೇವಾ.