ವಿಷಯಕ್ಕೆ ಹೋಗು

ಅಂಗ ಲಿಂಗವೆಂಬರು, ಲಿಂಗ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗ ಲಿಂಗವೆಂಬರು
ಲಿಂಗ ಅಂಗವೆಂಬರು
ಅದು ಹುಸಿ ಕಾಣಿರೊ
ಅಯ್ಯಾ ! ಅಂಗವೇ ಲಿಂಗವಾದರೆ ಕಾಯದಲ್ಲಿ ಕಳವಳವುಂಟೆ ? ಲಿಂಗವೆ ಅಂಗವಾದರೆ ಪ್ರಳಯಕ್ಕೊಳಗಹುದೆ ? ಅಂಗ ಲಿಂಗವಲ್ಲ
ಲಿಂಗ ಅಂಗವಲ್ಲ. ಅಂಗ-ಲಿಂಗ ಸಂಬಂಧವಳಿದಲ್ಲಿ ಪ್ರಾಣಲಿಂಗಸಂಬಂಧಿ
ಪ್ರಾಣ ನಿಃಪ್ರಾಣವಾದಲ್ಲಿ ಲಿಂಗರೂಪು
ರೂಪು ನಾಸ್ತಿಯಾದಂದು ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.