ಅಂಜನದ ಬಲದಿಂದೆ ನೆಲದ ಮರೆಯ ದ್ರವ್ಯವ ಕಾಣುವಂತೆ ಎನ್ನ ಚಿತ್ತಿನ ಮಧ್ಯದಲ್ಲಿ ನಿತ್ಯ ಶಿವಜ್ಞಾನಾಂಜನವು ಪ್ರಜ್ವಲಿಸಲಾಗಿ ತತ್ವಾತತ್ತ್ವಂಗಳು ವ್ಯಕ್ತವಾದವು. ಅಖಂಡೇಶ್ವರನೆಂಬ ಪರವಸ್ತುವು ಹೂಳಿರ್ದ ಗೊತ್ತು ಕಾಣಬಂದಿತ್ತು.