ಅಂಡಜವಳಯವಿಲ್ಲದ ಮುನ್ನ, ದ್ವೀಪಂಗಳೇಳೂ

ವಿಕಿಸೋರ್ಸ್ದಿಂದ



Pages   (key to Page Status)   


ಅಂಡಜವಳಯವಿಲ್ಲದ ಮುನ್ನ
ದ್ವೀಪಂಗಳೇಳೂ ಇಲ್ಲದ ಮುನ್ನ
ರವಿಚಂದ್ರರಿಲ್ಲದ ಮುನ್ನ
ತ್ರಿದೇವತೆಗಳಿಲ್ಲದ ಮುನ್ನ
ಗುಹೇಶ್ವರನು ಉಲುಹಡಗಿರ್ದನಂದು ಅನಂತಕಾಲ !