ಅಂತರಂಗದಲ್ಲಿ ಜ್ಞಾನ, ಬಹಿರಂಗದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂತರಂಗದಲ್ಲಿ ಜ್ಞಾನ
ಬಹಿರಂಗದಲ್ಲಿ ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ ಏಕಭಾವವೆನಿಸಿಕೊಂಬುದಯ್ಯ. ಅದು ಹೇಗೆಂದಡೆ: ಹೊರಗೆ ಅಗ್ನಿ ಉರಿವುತಿಪ್ಪುದಯ್ಯ. ಕುಂಭದಲ್ಲಿ ಉದಕವಿಪ್ಪುದು. ಅಗ್ನಿಯ ಜ್ವಾಲೆಯ ಸಾಮಥ್ರ್ಯದಿಂದ ಕುಂಭದೊಳಗಿನ ಉದಕವು ಹೇಂಗೆ ಉಷ್ಣವಪ್ಪುದು ಹಾಂಗೆ ಜ್ಞಾನ ಸತ್ಕಿ ್ರಯೋಪಚಾರವ ಮಾಡಲಾಗಿ ಪ್ರಾಣವೆ ಲಿಂಗಸ್ವರೂಪವಪ್ಪುದು ತಪ್ಪದಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!