ಅಂಥ ಎಂಬತ್ತೆಂಟು ಬ್ರಹ್ಮಾಂಡವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಥ
ಬ್ರಹ್ಮಾಂಡವ
ಮೂವತ್ತೊಂಬತ್ತುಲಕ್ಷದ
ಮೇಲೆ
ಸಾವಿರದ
ಮುನ್ನೂರಾ
ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು
ಕ್ರತುಮರ್ದನವೆಂಬ
ಭುವನ.

ಭುವನದೊಳು
ಅನಂತಲೋಚನನೆಂಬ
ರುದ್ರಮೂರ್ತಿ
ಇಹನು.

ರುದ್ರಮೂರ್ತಿಯ
ಓಲಗದಲ್ಲಿ
ಆರುನೂರ
ತೊಂಬತ್ತುಕೋಟಿ
ಇಂದ್ರ-ಬ್ರಹ್ಮ-ನಾರಾಯಣ-ರುದ್ರರಿಹರು.
ಆರುನೂರ
ತೊಂಬತ್ತುಕೋಟಿ
ಚಂದ್ರಾದಿತ್ಯರು
ವೇದಪುರುಷರು
ಮುನೀಂದ್ರರು
ದೇವರ್ಕಳಿಹರು
ನೋಡಾ
ಅಪ್ರಮಾಣಕೂಡಲಸಂಗಮದೇವಾ.