ಅಂಥ ಬಲಪ್ರಮದಿನಿಯೆಂಬ ಬ್ರಹ್ಮಾಂಡವ
ಗೋಚರ
ಲೇಖಕರು: ಬಾಲಸಂಗಯ್ಯ ಅಪ್ರಮಾಣ ದೇವ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಥ ಬ್ರಹ್ಮಾಂಡವ ಮೂವತ್ತಾರುಸಾವಿರದ ಮುನ್ನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಬಲಪ್ರಮದಿನಿಯೆಂಬ ಭುವನ. ಆ ಭುವನದೊಳು ಜ್ಯೋತಿರ್ಮಯನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾ ಎಂಬತ್ತುಕೋಟಿ ಬ್ರಹ್ಮ ನಾರಾಯಣ ರುದ್ರರು
ವೇದಪುರುಷರು
ಮುನೀಂದ್ರರು
ನೂರಾ ಎಂಬತ್ತುಕೋಟಿ ಇಂದ್ರಚಂದ್ರಾದಿತ್ಯರು
ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.