ಅಂದಿನ ದಿನವನಂತಿರಿಸಿ, ಇಂದಿನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂದಿನ ದಿನವನಂತಿರಿಸಿ
ಇಂದಿನ ದಿನವನಿಂತಿರಿಸಿ
ತಾ ಬೇರೆ ಮತ್ತೊಂದು ಪರಿಯಾದ ಅಪ್ಪಣ್ಣನು. ಅಂದಿನವನಂತಾಗದೆ ಇಂದಿನವನಂತಾಗದೆ
ಅಂತಿಂತುವ ಕೆಡಿಸಿ ಮತ್ತೊಂದಾದನು(ನ?)ವ. ಶ್ರುತಿಗೆಟ್ಟು ಮತಿಗೆಟ್ಟು ಹದಗೆಟ್ಟು ಹವಣುಗೆಟ್ಟು
ಬಿಮ್ಮುಗೆಟ್ಟು ಬೆಮಳ ವಿಮಳನಾದ ಅಪ್ಪಣ್ಣನು. ಗಣಿತ ಗುಣಿತವನಳಿದುಳಿದು
ಅಗಣಿತನಚಳಿತನಾದ ಅಪ್ಪಣ್ಣನು. ಅಮಳೋಕ್ಯವಾದ ಘನವ
ಅಮಳೋಕ್ಯವಾದ ಮಹವ
ಅಮಳೋಕ್ಯವಾದ ನಿಜದ ನಿಲವ ; ಕುಲಗೆಟ್ಟ
ಛಲಗೆಟ್ಟ
ಲಜ್ಜೆಗೆಟ್ಟ
ಭವಗೆಟ್ಟ ಗುಹೇಶ್ವರನ ಶರಣ ಸಂಗಮೇಶ್ವರದ ಅಪ್ಪಣ್ಣನು.