ವಿಷಯಕ್ಕೆ ಹೋಗು

ಅಂಧಕಂಗೆ ಬಂಜೆಗೆ ಕಣ್ಣು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಅಂಧಕಂಗೆ ಕಣ್ಣು ಬಂದಂತೆ
ಹೆಳವಂಗೆ ಕಾಲು ಬಂದಂತೆ
ಬಂಜೆಗೆ ಮಗನಾದಂತೆ
ನಿರ್ಧನಿಕಂಗೆ ನಿಧಾನವು ಸೇರಿದಂತೆ
ಮರಣವುಳ್ಳವಂಗೆ ಮರುಜೇವಣಿಗೆ ದೊರೆಕೊಂಡಂತೆ
ಅಖಂಡೇಶ್ವರಾ
ನೀವೆನ್ನ ಕರಸ್ಥಲಕ್ಕೆ ಬಂದ ಫಲವು ಇಂತುಟಯ್ಯ.