ಅಕಲ್ಪಿತ ನಿತ್ಯ ನಿರಂಜನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಕಲ್ಪಿತ
ನಿತ್ಯ
ನಿರಂಜನ
ನಿಃಸೀಮ
ನಿರವಯ
ಅಖಂಡ
ಪರಿಪೂರ್ಣ
ಪರಂಜ್ಯೋತಿಯಾದ
ಮಹಾ
ಘನವಸ್ತುವಿನಲ್ಲಿ
ಪರಮಾತ್ಮನುತ್ಪತ್ತಿ.

ಪರಮಾತ್ಮನಿಂದ
ಅಂತರಾತ್ಮನುತ್ಪತ್ತಿ.

ಅಂತರಾತ್ಮನಿಂದ
ಜೀವಾತ್ಮನುತ್ಪತ್ತಿ.

ತ್ರಯಾತ್ಮರೊಳಗೆ
ಜೀವ_ಅಂತರಾತ್ಮಾದಿಗಳೆ
ಪಾಶಬದ್ಧರು
ಪರಮಾತ್ಮನೆ
ಪಾಶಮುಕ್ತನು.

ಸಂಚವನರಿದ
ದ್ವಂದ್ವರಹಿತ
ತಾನೆ
ನಮ್ಮ
ಗುಹೇಶ್ವರಲಿಂಗದಲ್ಲಿ
ಯಂತ್ರವಾಹಕನೆನಿಸುವನು.