ವಿಷಯಕ್ಕೆ ಹೋಗು

ಅಕಾಯನೆಂಬ ಜಂಗಮ ಮತ್ರ್ಯಕ್ಕೆ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಕಾಯನೆಂಬ ಜಂಗಮ ಮತ್ರ್ಯಕ್ಕೆ ಬಂದು
ಎನ್ನ ಧನ್ಯನ ಮಾಡಲೆಂದು
ಸಕಲ ಧಾನ್ಯಗಳ ಪೂರ್ವಾಶ್ರಯವ ಕಳೆದು ಪ್ರಸಾದವೆಂದು ಹೆಸರಿಟ್ಟನು. ಆ ಜಂಗಮದ ಹಸ್ತದಲ್ಲಿ ಭಕ್ತಿ ಇಹುದು
ಆ ಜಂಗಮದ ಜಿಹ್ವೆಯಲ್ಲಿ ಪ್ರಸಾದ ಇಹುದು
ಆ ಜಂಗಮದ ದೇಹದಲ್ಲಿ ಜಂಗಮ ಇಹುದು. ಇಂತೀ ತ್ರಿವಿಧಪ್ರಸಾದವನಿಕ್ಕಿದ ಜಂಗಮಕ್ಕೆ ಶರಣೆಂದು ಶುದ್ಧನಾದೆನಯ್ಯಾ ಕೂಡಲಚೆನ್ನಸಂಗಮದೇವಾ.