ಅಕ್ಷರವೆಂಬುದು ಲೆಕ್ಕದೊಳಗು; ಲೆಕ್ಕವೆಂಬುದು
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಕ್ಷರವೆಂಬುದು ಲೆಕ್ಕದೊಳಗು; ಲೆಕ್ಕವೆಂಬುದು ನೆನಹಿನೊಳಗು; ಇವೆಲ್ಲಾ ಕಲ್ಪಿತದೊಳಗು. ಕಲ್ಪಿತವೆಂಬುದು ಖಂಡಿತ ನೋಡ ಅಖಂಡ ಪರಿಪೂರ್ಣ
ನಿರ್ವಿಕಲ್ಪ
ನಿತ್ಯಾತ್ಮಕನಾದ ಲಿಂಗೈಕ್ಯನ ಕಲ್ಪಿತಕ್ಕೆ ತಂದು ನುಡಿವ ಕರ್ಮಕಾಂಡಿಗಳನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.