ವಿಷಯಕ್ಕೆ ಹೋಗು

ಅಖಂಡಜ್ಞಾನಭರಿತ ಮೇಘಾದಿಗಳೆ ಶರಣಂಗೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಅಖಂಡಜ್ಞಾನಭರಿತ ಶರಣಂಗೆ ಪೃಥ್ವಿಯೆ ಖಟ್ವಾಂಗ
ಆಕಾಶವೇ ಕಿರೀಟ
ಮೇಘಾದಿಗಳೆ ಮಜ್ಜನ
ನಕ್ಷತ್ರಂಗಳೆ ಪುಷ್ಪಮಾಲೆಗಳು
ವೇದಂಗಳೆ ಮುಖಂಗಳು
ಶಾಸ್ತ್ರಂಗಳೆ ಅವಯವಂಗಳು
ಸೋಮಸೂರ್ಯಾಗ್ನಿಗಳೆ ನಯನಂಗಳು
ದಶದಿಕ್ಕುಗಳೆ ಹೊದಿಕೆಗಳು
ಬ್ರಹ್ಮಾಂಡವೆ ಒಡಲಾದ ಮಹಾಮಹಿಮನ ಏನೆಂದು ಉಪಮಿಸಬಹುದಯ್ಯಾ ಅಖಂಡೇಶ್ವರಾ. ?