ಅಗ್ನಿಮಂಡಲ ಆದಿತ್ಯಮಂಡಲ ಚಂದ್ರಮಂಡಲವೆಂಬ ಮಂಡಲತ್ರಯಂಗಳ ಹಾಯ್ದು ಬ್ರಹ್ಮಚಕ್ರ ಶಿಖಾಚಕ್ರವ ಹಾಯ್ದು ಆಚೆ ಪಶ್ಚಿಮಚಕ್ರವ ಮುಟ್ಟಿ ಆ ಬ್ರಹ್ಮನಾಡಿ ಏಕನಾಡಿಯಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.