Library-logo-blue-outline.png
View-refresh.svg
Transclusion_Status_Detection_Tool

ಅಗ್ನಿಯೆ ಹಸ್ತಕ್ಕೆ ಅಂಗವಾದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅಗ್ನಿಯೆ ಅಂಗವಾದ ಪ್ರಸಾದಿಗೆ ನಿರಹಂಕಾರವೆ ಹಸ್ತ. ಆ ಹಸ್ತಕ್ಕೆ ಇಚ್ಛಾಶಕ್ತಿ
ಆ ಶಕ್ತಿಗೆ ಶಿವಲಿಂಗ
ಆ ಶಿವಲಿಂಗಕ್ಕೆ ನೇತ್ರೇಂದ್ರಿಯವೆ ಮುಖ
ಆ ಮುಖಕ್ಕೆ ಸುರೂಪುಪದಾರ್ಥ ; ಆ ಪದಾರ್ಥವನು ನೇತ್ರದಲ್ಲಿಹ ಶಿವಲಿಂಗಕ್ಕೆ ಸಾವಧಾನಭಕ್ತಿಯಿಂದರ್ಪಿಸಿ
ಆ ಸುರೂಪುಪ್ರಸಾದವನು ಪಡೆದು ಸುಖಿಸುವಾತನೆ ಪ್ರಸಾದಿಯಯ್ಯಾ ಅಖಂಡೇಶ್ವರಾ.