ವಿಷಯಕ್ಕೆ ಹೋಗು

ಅಗ್ನಿ ಮುಟ್ಟಲು ತೃಣ,

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಗ್ನಿ ಮುಟ್ಟಲು ತೃಣ
ಭಸ್ಮವಾದುದನೆಲ್ಲರೂ ಬಲ್ಲರು. ತೃಣದೊಳಗೆ ಅಗ್ನಿಯುಂಟೆಂಬುದ ತಿಳಿದು ನೋಡಿರೆ. ಅಗ್ನಿ ಜಲವ ನುಂಗಿತ್ತು
ಜಲ ಅಗ್ನಿಯ ನುಂಗಿತ್ತು. ಪೃಥ್ವಿ ಎಲ್ಲವ ನುಂಗಿತ್ತು
ಆಕಾಶವನೆಯ್ದೆ ನುಂಗಿತ್ತು. ಅರಿದೆನೆಂಬ ಜಡರುಗಳು ನೀವು ತಿಳಿದು ನೋಡಿರೆ_ ತಿಳಿಯಬಲ್ಲಡೆ ಗುಹೇಶ್ವರನ ನಿಲವು ತಾನೆ !