ಅಜ್ಞಾನ ಹಿಂಗಿತ್ತು
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಜ್ಞಾನ ಹಿಂಗಿತ್ತು
ಅಹಂಕಾರವಡಗಿತ್ತು
ಅರಿಷಡ್ವರ್ಗಂಗಳು ಹರಿಹಂಚಾದವು
ಅಷ್ಟಮದಂಗಳು ಪಟ್ಟಪರಿಯಾದವು
ದಶವಾಯುಗಳು ವಶವರ್ತಿಯಾದವು
ಇಂದ್ರಿಯಂಗಳು ಬಂಧನವಡೆದವು
ಮನೋವಿಕಾರ ನಿಂದಿತ್ತು. ಕೂಡಲಸಂಗಮದೇವಾ
ನಿಮ್ಮಲ್ಲಿ ನಮ್ಮ ಮಹಾದೇವಿಯಕ್ಕಗಳ ನಿರ್ವಾಣದ ಸಹಜ ನಿಲವ ಕಂಡು
ನಮೋ ನಮೋ ಎನುತಿರ್ದೆನಯ್ಯಾ
ಪ್ರಭುವೆ.