ಅಜ ಹರಿ ಸುರ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಜ ಹರಿ ಸುರ ಮನು ಮುನಿಗಳ ಮರುಳುಮಾಡಿ ಕಾಡಿತ್ತೀ ಮಾಯೆ. ಪತಿವ್ರತೆಯೆಂಬುವರ ಪರಿಯಟಣಗೊಳಿಸಿತ್ತೀ ಮಾಯೆ. ಯತಿಗಳೆಂಬವರ ಎದೆಯೆದೆಯನೊದೆದಿತ್ತೀ ಮಾಯೆ. ಸಚರಾಚರಂಗಳನೆಲ್ಲವ ಜನನ ಮರಣಗಳೆಂಬ ಅಣಲೊಳಗಿಕ್ಕಿ ಆಗಿದಗಿದು ಉಗಿಯಿತ್ತು ನೋಡ ಮಾಯೆ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
ನಿಮ್ಮ ಶರಣರಲ್ಲದವರ ಕೊಂದು ಕೂಗಿಸಿತ್ತು ನೋಡ ಈ ಮಾಯೆ.