ಅಟ್ಟಪದಾರ್ಥವೆಲ್ಲವ ಮೆಟ್ಟಿ ಮೆಟ್ಟಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಟ್ಟಪದಾರ್ಥವೆಲ್ಲವ ಮೆಟ್ಟಿ ಮೆಟ್ಟಿ ತುಂಬಿಸಿಕೊಂಬರಯ್ಯ
ಹೊಟ್ಟೆಗೆ ಕಾಣದ ಅರಪಿನಂತೆ. ಇಷ್ಟಲಿಂಗಕ್ಕೆ ಕೊಟ್ಟೆನೆಂದು ಲಿಂಗವ ಬಿಗಿಬಿಗಿದು ಕಟ್ಟಿಕೊಂಡು ಹೊಟ್ಟೆಯ ತುಂಬಿಕೊಂಬ ಭ್ರಷ್ಟರಿಗೆ ಪ್ರಸಾದವೆಲ್ಲಿಯದೊ? ತಟ್ಟುವ ಮುಟ್ಟುವ ಮರ್ಮವನರಿದು ಕಾಯದ ಕರಣದ ಕೈಯಲ್ಲಿ ಇಷ್ಟಲಿಂಗದ ಮುಖವನರಿದು ಕೊಟ್ಟು ಕೊಳಬಲ್ಲರೆ ಪ್ರಸಾದಿಯೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.