ಅಟ್ಟಿತ್ತೊಂದು, ಓಡಿತ್ತೊಂದು, ಮುಟ್ಟಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಟ್ಟಿತ್ತೊಂದು
ಓಡಿತ್ತೊಂದು
ಮುಟ್ಟಿ ಹಿಡಿಯಿತ್ತೊಂದು. ಅಟ್ಟಾಟಿಕೆಯಲಿ ಅರಿದಾವುದು ! ಹಸು ಮಾಣಿಕ್ಯವ ನುಂಗಿ ಬ್ರಹ್ಮೇತಿಗೊಳಗಾಯಿತ್ತು. ಮೂರ್ತಿಯಾದುದೆ ಅಮೂರ್ತಿಯಾದತ್ತು
ಅಮೂರ್ತಿಯಾದುದೆ ಮೂರ್ತಿಯಾದತ್ತು. ಇದನೆಂತು ತೆಗೆಯಬಹುದು ? ಇದನೆಂತು ಕೊಳಬಹುದು ! ಅಗಮ್ಯ
ಅಗೋಚರ. ಕಾಯವು ಲಿಂಗದೊಳಡಗಿ
ಪ್ರಾಣವು ಲಿಂಗದೊಳಗಿದ್ದು
ನೀನೆನ್ನ ಕರಸ್ಥಲದೊಳಗೆ ಮೂರ್ತಿಗೊಂಡು
ಕಾರುಣ್ಯವ ಮಾಡು ಗುಹೇಶ್ವರಾ.