ಅಣಿಮಾ ಗರಿಮಾ ಲಘಿಮಾ ಮಹಿಮಾ ಪ್ರಾಪ್ತಿ ಪ್ರಾಕಾಮ್ಯ ಈಶತ್ವ ವಶತ್ವವೆಂಬ ಅಷ್ಟಮಹದ್ವೆ ೈಶ್ಚರ್ಯವ ತೃಣೀಕರಿಸಿಕೊಂಡಿಪ್ಪನು ನೋಡಾ ಶರಣನು. ಅಂಜನಾಸಿದ್ಧಿ
ಘುಟಿಕಾಸಿದ್ಧಿ
ಕಾಯಸಿದ್ಧಿ
ರಸಸಿದ್ಧಿ
ವಾಚಾಸಿದ್ಧಿ
ದೂರಶ್ರವಣ
ದೂರದೃಷ್ಟಿ
ತ್ರಿಕಾಲಜ್ಞಾನ
ಪರಕಾಯಪ್ರವೇಶ
ಖೇಚರಗಮನ. ಅಗ್ನಿಸ್ತಂಭ
ಜಲಸ್ತಂಭ
ಮಾರಣ
ಮೋಹನ
ಉಚ್ಛಾಟನ ಇಂತಿವು ಮೊದಲಾದ ನಾನಾಕುಟಿಲಸಿದ್ಧಿಯ ಪ್ರಪಂಚ ಹೊದ್ದನು ನೋಡಾ ಶರಣನು. ಗುಣತ್ರಯಂಗಳನಳಿದ ನಿರ್ಗುಣನು ನಿತ್ಯನು ನಿರಾಮಯನು ನೋಡಾ ಶರಣನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.