ವಿಷಯಕ್ಕೆ ಹೋಗು

ಅಣುಕುಂಡಲ ನಾಗಬಂಧನವೆಂಬ ಸುಷುಮ್ನನಾಳದಿಂದ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಣುಕುಂಡಲ ನಾಗಬಂಧನವೆಂಬ ಸುಷುಮ್ನನಾಳದಿಂದ ಒದಗಿದ ನಿರೂಪ(ಬಿಂದು)ವನು ಒಸರಲೀಯದೆ ಕಟ್ಟಿಹೆನೆಂದರೆ ಆ ಶಶಿಧರಂಗಳವಲ್ಲ. ಒಡಲುಗೊಂಡರೆ ಒಸರುವುದು ಮಾಬುದೆ ? ಒಡಲಿಲ್ಲದಿದ್ದರೆ ಒಸರುವುದು ಮಾಬುದು. ಒಸರಲೀಯದೆ ಕಟ್ಟಿದೆನೆಂಬ ಮೂರ್ಖರೆಲ್ಲಾ ಭಂಗಬಟ್ಟು ನಸಿದ್ಧರಾಗಿ ಹೋದರಯ್ಯಾ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ
ಕೋಟ್ಯನುಕೋಟಿ ಕರ್ಮವ ಪೂಜಿಸುವ ಕರ್ಮಿಗಳೆತ್ತ ಬಲ್ಲರು
ಆ ಶರಣನ ? ಭಕ್ತಿ ಹಿಂದುಮುಂದಾದ ಮಹಾಲಿಂಗೈಕ್ಯನ ನಿಲವ ? ಇದು ಕಾರಣ
ಕೂಡಲಚೆನ್ನಸಂಗಯ್ಯಾ ಲಿಂಗೈಕ್ಯರ ನಿಲವ ಲಿಂಗೈಕ್ಯನೇ ಬಲ್ಲ.