ಅತಳಲೋಕ ಸುತಳಲೋಕ ತಾನಿರ್ದಲ್ಲಿ
ವಿತಳಲೋಕ ತಳಾತಳಲೋಕ ತಾನಿರ್ದಲ್ಲಿ
ರಸಾತಳಲೋಕ ಸ್ವಸ್ಥಲಲೋಕ ತಾನಿರ್ದಲ್ಲಿ
ಪಾತಾಳಲೋಕ ತಾನಿರ್ದಲ್ಲಿ
ಭೂಲೋಕ ಭುವರ್ಲೋಕ ತಾನಿರ್ದಲ್ಲಿ
ಮಹರ್ಲೋಕ ಸ್ವರ್ಲೋಕ ತಾನಿರ್ದಲ್ಲಿ
ಜನರ್ಲೋಕ ತಪರ್ಲೋಕ ತಾನಿರ್ದಲ್ಲಿ
ಸತ್ಯರ್ಲೋಕ ತಾನಿರ್ದಲ್ಲಿ
ಇಹಲೋಕ ಪರಲೋಕ ಕಾಳಾಂಧರಲೋಕ ತಾನಿರ್ದಲ್ಲಿ. ಇಂತೀ ಲೋಕಾದಿಲೋಕಂಗಳೆಲ್ಲಾ ತನ್ನಲ್ಲಿ ಉತ್ಪತ್ಯ ಸ್ಥಿತಿ ಲಯವಾದಕಾರಣ ತಾನೇ ಪರಂಜ್ಯೋತಿಲಿಂಗ ನೋಡಾ ಅಪ್ರಮಾಣಕೂಡಲಸಂಗಮದೇವಾ.