ಅತ್ತಿತ್ತ ನೋಡದಿರು

ವಿಕಿಸೋರ್ಸ್ ಇಂದ
Jump to navigation Jump to search

ಕನ್ನಡವೊ ಕನ್ನಡ, ನಾವು ಮಾತಾಡೊ ಕನ್ನಡ, ನಾವು ಮುದ್ದಾಡೊ ಕನ್ನಡ, ಕರುನಾಡ ಕಸ್ತೂರಿ ಕನ್ನಡ !!ಕನ್ನಡವೊ!!

ಪಂಪ ರನ್ನರಿಂದ ಹಳಗನ್ನಡ, ಸರ್ವಘ್ನ ಸಮಾನರಿಂದ ನಡುಗನ್ನಡ, ಕುವೆಂಪು ಮಾಸ್ತಿಯವರಿಂದ ಹೊಸಗನ್ನಡ !!ಕನ್ನಡವೊ!!

ಮೈಸೂರು ಕನ್ನಡ, ಮಂಗಳೂರು ಕನ್ನಡ, ಬೆಂಗಳೂರು ಕನ್ನಡ, ನಮ್ಮಮ್ಮ ಕಲಿಸಿದ ಮಾತೃಬಾಷೆ ಕನ್ನಡ !!ಕನ್ನಡವೊ!!

ಪಂಚಕೋಟಿ ನಾಲೆಗೆಯಲ್ಲಿ ಮಾತಾಡೂ ಕನ್ನಡ, ಕನ್ನಡವೇ ನಮ್ಮ ಜೀವ, ಕನ್ನಡವೇ ನಮ್ಮ ಭಾವ, ಕನ್ನಡವೇ ಇಂದು ಮುಂದೆಂದೂ ಸಾರುವ !!ಕನ್ನಡವೊ!!

ಹಾಡನ್ನು ಬರೆದವರು : ಅಣ್ಣಪ್ಪ.ಆರ್, ಕೈಗಾ ಟೌನ್ ಶಿಪ್, ಕಾರವಾರ, ಕರ್ನಾಟಕ