Transclusion_Status_Detection_Tool

ಅದ್ವೆ ೈತವ ನುಡಿವ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಅದ್ವೆ ೈತವ ನುಡಿವ ಬದ್ಧಭವಿಗಳಿರಾ ಮನದ ಕ್ಷುದ್ರವಡಗದು ಕಾಣಿ ಭೋ. ತತ್ತ್ವಾರ್ಥವ ನುಡಿವ ವ್ಯರ್ಥಕಾಯರುಗಳಿರಾ ವಿಕಾರದ ಕತ್ತಲೆ ಹರಿಯದು ಕಾಣಿ ಭೋ. ಶಿವಾನುಭಾವ ನಿಮಗೇಕೆ? ಸತ್ತ ಹಾಂಗಿರಿ ಭೋ. ತತ್ತ್ವವತ್ತಲೆಯಾಗಿ ನೀವಿತ್ತಲೆಯಾಗಿ ಮೃತ್ಯುವಿನ ಬಾಯ ತುತ್ತಾದಿರಲ್ಲಾ. ತತ್ತ್ವವಿತ್ತುಗಳು ವೃಥಾ ಸತ್ತುದ ಕಂಡು ಮೃತ್ಯುಂಜಯನ ಶರಣರು ನಗುತಿಪ್ಪರು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.