Library-logo-blue-outline.png
View-refresh.svg
Transclusion_Status_Detection_Tool

ಅನಂತಕೋಟಿ ಆ ಯಜ್ಞಂಗಳ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅನಂತಕೋಟಿ ಯಜ್ಞಂಗಳ ಮಾಡಿ ತೊಳಲಿ ಬಳಲಲದೇಕೊ ? ಆ ಯಜ್ಞಂಗಳ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅನಂತಕಾಲ ತಪವಮಾಡಿ ತೊಳಲಿ ಬಳಲಲದೇಕೊ ? ಆ ತಪಸ್ಸಿನ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅನಂತಕಾಲ ದಾನವಮಾಡಿ ತೊಳಲಿ ಬಳಲಲದೇಕೊ ? ಆ ದಾನದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅನಂತಕಾಲ ವೇದಾಭ್ಯಾಸವಮಾಡಿ ತೊಳಲಿ ಬಳಲಲದೇಕೊ ? ಆ ವೇದಾಭ್ಯಾಸದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅದೆಂತೆಂದೊಡೆ :ಪದ್ಮಪುರಾಣದಲ್ಲಿ- ``ಸರ್ವಯಜ್ಞತಪೋದಾನವೇದಾಭ್ಯಾಸೈಶ್ಚ ಯತ್ಫಲಮ್