ಅನಂತಕೋಟಿ ಪ್ರಾಣೇಂದ್ರಿಯ ಬ್ರಹ್ಮಾಂಡಗಳನೊಳಕೊಂಡ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡ ಮಹಾಘನಲಿಂಗದಲ್ಲಿ ತನ್ನ ಅಂಗ ಮನ ಪ್ರಾಣೇಂದ್ರಿಯ ವಿಷಯ ಕರಣಂಗಳ ಹೂಳಿ
ತಾನಿಲ್ಲದೆ ನಡೆವುತ್ತೆ
ತಾನಿಲ್ಲದೆ ನುಡಿವುತ್ತೆ
ತಾನಿಲ್ಲದೆ ಹಿಡಿವುತ್ತೆ
ತಾನಿಲ್ಲದೆ ಬಿಡುತ್ತೆ
ತಾನಿಲ್ಲದೆ ನೋಡುತ್ತೆ
ತಾನಿಲ್ಲದೆ ಆಡುತ್ತೆ ಬಯಲ ಬೊಂಬೆಯಂತೆ ಸುಳಿವ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.