Library-logo-blue-outline.png
View-refresh.svg
Transclusion_Status_Detection_Tool

ಅನಂತ ವರುಷದವರ ಹಿರಿಯರೆಂಬೆನೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅನಂತ ವರುಷದವರ ಹಿರಿಯರೆಂಬೆನೆ ? ಎನ್ನೆನು_ ಅವರು ಭೂಭಾರಕರಾಗಿ. ಏಳು ವರುಷದ ಹಿರಿಯ ಚೀಲಾಳ; ಹನ್ನೆರಡು ವರುಷದ ಹಿರಿಯಳು ಮಹಾದೇವಿಯಕ್ಕ. ಅಂಡಜ ಪಿಂಡಜ ಮೀನಜರೆಂಬವರೆಲ್ಲಾ ಅಂದಂದಿನ ಬಾಲಕರು. ನಿಮಗೆ ಬುದ್ಧಿಯ ಹೇಳುವಡೆ ಎನಗೆ ಬುದ್ಧಿಯಿಲ್ಲ
ಕೂಡಲಚೆನ್ನಸಂಗಮದೇವಾ.